ಬ್ರೇಕಿಂಗ್ ನ್ಯೂಸ್
05-08-24 10:54 pm HK News Desk ದೇಶ - ವಿದೇಶ
ತಿರುವನಂತಪುರಂ, ಆಗಸ್ಟ್.5: ವಯನಾಡ್ ಜಿಲ್ಲೆಯಲ್ಲಾದ ಭೂಕುಸಿತ ದುರಂತಕ್ಕೆ ಮಾನವ ಕೃತ ಅಪರಾಧವೇ ಮುಖ್ಯ ಕಾರಣವೆಂದು ಕಂಡುಬಂದಿದೆ. ವಯನಾಡು ಜಿಲ್ಲೆಯ ಬಹುತೇಕ ಭಾಗ ಪಶ್ಚಿಮ ಘಟ್ಟ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿದ್ದರೂ ಅದರ ಬಹುಪಾಲನ್ನು ಅತಿಕ್ರಮಿಸಿ ಕಾಡುಗಳನ್ನು ಕಡಿದು ಎಸ್ಟೇಟ್ ಮಾಡಿಕೊಂಡಿರುವುದು ಮತ್ತು ಪ್ರತಿ ವರ್ಷ ಇಲ್ಲಿನ ಬೆಟ್ಟಗಳನ್ನು ಅತಿಕ್ರಮಿಸಿ ಕಟ್ಟಡಗಳನ್ನು ಕಟ್ಟಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಅತಿ ಹೆಚ್ಚು ಹಾನಿಗೀಡಾದ ಮೇಪ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ 2016-17 ರಲ್ಲಿ 385 ಹೊಸ ಕಟ್ಟಡಗಳು ತಲೆ ಎತ್ತಿದ್ದರೆ, 2017-18ರ ಅವಧಿಯಲ್ಲಿ ಈ ಸಂಖ್ಯೆ 406ಕ್ಕೆ ಏರಿಕೆಯಾಗಿತ್ತು. 2018-19ರ ಅವಧಿಯಲ್ಲಿ 338 ಹೊಸ ಕಟ್ಟಡಗಳು ತಲೆಯೆತ್ತಿದ್ದವು. 2019-20 ರಲ್ಲಿ 366 ಕಟ್ಟಡಗಳು ಅತಿಕ್ರಮಿಸಿಕೊಂಡು ನಿರ್ಮಾಣವಾಗಿದ್ದವು. ಕೋವಿಡ್ನಿಂದಾಗಿ 2020-21 ರಲ್ಲಿ ಈ ಸಂಖ್ಯೆ 225ಕ್ಕೆ ಇಳಿಕೆಯಾಗಿದ್ದರೆ 2021-22 ರಲ್ಲಿ ಇದು 431ಕ್ಕೆ ಭಾರೀ ಏರಿಕೆಯಾಗಿತ್ತು.
ವಯನಾಡು ಜಿಲ್ಲೆಯಲ್ಲಿ ಒಟ್ಟಾರೆ 2016-17 ರಲ್ಲಿ 10,471 ಹೊಸ ಕಟ್ಟಡಗಳು ನಿರ್ಮಾಣವಾಗಿದ್ದರೆ, 2021-22 ರಲ್ಲಿ ಇದು 12,171ಕ್ಕೆ ಏರಿತ್ತು. ಈಗ ಸಿಕ್ಕಿರುವ ಮಾಹಿತಿ 2021-22ರ ವರೆಗೆ ಮಾತ್ರ ಇದೆ. ಕಳೆದ ವರ್ಷ ಮತ್ತು ಈ ವರ್ಷದ ಮಾಹಿತಿ ಲಭ್ಯವಾಗಿಲ್ಲ. ವಯನಾಡು ಪ್ರಕೃತಿ ಸೌಂದರ್ಯದ ಬೀಡಾಗಿರುವ ಕಾರಣ ಪ್ರವಾಸೋದ್ಯಮ ದೊಡ್ಡ ಅದಾಯದ ಮೂಲ. ಮೇಪ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ 44 ಅಕ್ರಮ ರೆಸಾರ್ಟ್ಗಳು ತಲೆಯೆತ್ತಿದ್ದವು.
ದುರಂತದ ನಡುವೆಯೂ ಪ್ರವಾಸಿಗರು ವಯನಾಡು ಜಿಲ್ಲೆಗೆ ಬರುತ್ತಿದ್ದು, ಭಾನುವಾರ ಮುಂಡಕ್ಕೈಗೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ವಾಹನವನ್ನು ಹಿಂಬಾಲಿಸಿದ್ದ ಪಂಚಾಯತ್ ಅಧಿಕಾರಿಗಳು ಭಾರೀ ಮಳೆಯ ಕಾರಣ ನೀಡಿ ವಾಪಸ್ ಕಳುಹಿಸಿದ್ದರು. ಮುಂಡಕ್ಕೈ ಅರಣ್ಯ ಪ್ರದೇಶವಾಗಿದ್ದು ಈ ಹಿಂದೆ ಕಾಡಾನೆಗಳು ಮತ್ತು ಇತರ ಕಾಡು ಪ್ರಾಣಿಗಳು ಸಂಚರಿಸುತ್ತಿದ್ದವು. ಆದರೆ ರೆಸಾರ್ಟ್ ಆರಂಭಿಸಿದ ವ್ಯಕ್ತಿಗಳು ಪಟಾಕಿ ಸಿಡಿಸುವ ಮೂಲಕ ಮತ್ತು ರಬ್ಬರ್ ಗುಂಡುಗಳನ್ನು ಹಾರಿಸುವ ಮೂಲಕ ಆನೆಗಳನ್ನು ಓಡಿಸುತ್ತಿದ್ದಾರೆ.
ಅಧ್ಯಯನಗಳ ಪ್ರಕಾರ 1950ರ ವೇಳೆಗೆ ವಯನಾಡು ಜಿಲ್ಲೆಯ 85 ಶೇಕಡಾ ಭಾಗ ಪಶ್ಚಿಮ ಘಟ್ಟದ ಅರಣ್ಯ ಭಾಗದಲ್ಲಿತ್ತು. 2018ರ ವೇಳೆಗೆ ಈ ಪೈಕಿ 62 ಶೇಕಡಾ ಅರಣ್ಯ ನಾಶವಾಗಿದೆ. ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವುದು ಮತ್ತು ಕಾಡುಗಳನ್ನು ಕಡಿದು ಪರ್ವತಗಳಲ್ಲಿ ಟೀ ತೋಟ ನಿರ್ಮಿಸಲು ಅವಕಾಶ ನೀಡಲಾಗಿತ್ತು. ಸ್ಥಳೀಯಾಡಳಿತದ ಸಹಕಾರದಿಂದ ಬೇಕಾಬಿಟ್ಟಿ ಎನ್ನುವ ರೀತಿ ರೆಸಾರ್ಟ್, ಹೋಮ್ ಸ್ಟೇಗಳು ತಲೆಯೆತ್ತಿದ್ದವು. ಆದರೆ ಈಗ ಮೇಪ್ಪಾಡಿ, ಮುಂಡಕೈ ಪ್ರದೇಶದಲ್ಲಿ ರೆಸಾರ್ಟ್, ಹೋಮ್ ಸ್ಟೇ ಸೇರಿದಂತೆ ಅಮಾಯಕ ಜನರು ಕಟ್ಟಿಕೊಂಡಿದ್ದ ಮನೆಗಳೂ ಆಹುತಿಯಾಗಿವೆ. ಇದರ ಜೊತೆಗೆ ನೂರಾರು ಜನರ ಬದುಕೂ ಸಮಾಧಿಯಾಗಿದೆ.
Two days after the state govt ordered crackdown on illegal construction along Western Ghats within a month, forest minister Eshwar Khandre Sunday announced a task force to clear encroachments in the Ghats spread across 10 districts of the state.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am